Loading...
Top

ಪರಿಚಯ ನನ್ನ ಬಗ್ಗೆ

ಡಾ. ಶ್ರೀಧರ ಭಂಡಾರಿ, ಹಿರಿಯ ಯಕ್ಷಗಾನ ಕಲಾವಿದರು.


ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲ, ಶಾಂತಲಾ, ಅನಿಲ ಹಾಗೂ ಪುತ್ರ ದೇವಿ ಪ್ರಕಾಶ್ ಜೊತೆಗಿನ ಸಂತೃಪ್ತ ಜೀವನ. ೧೯೪೫ ನೇ ಇಸವಿಯಲ್ಲಿ ಜನನ. ತಂದೆ ಶೀನಪ್ಪ ಭಂಡಾರಿ ಹಾಗೂ ತಾಯಿ ಸುಂದರಿಯವರ ಸುಪುತ್ರ. ಇವರ ತಂದೆ, ತಾತ, ಮಾವಂದಿರೆಲ್ಲರೂ ಯಕ್ಷಗಾನ ಪರಂಪರೆಗೆ ಸೇರಿದವರು. ಹೀಗಾಗಿ ಈ ಕಲೆ ಬಳುವಳಿಯಾಗಿ ಪಡೆದ ಡಾ. ಶ್ರೀಧರ ಭಂಡಾರಿಗಳು ತಮ್ಮ ಜೀವನವನ್ನು ಇದೇ ಕ್ಷೇತ್ರಕ್ಕೆ ಮುಡಿಪಾಗಿಟ್ಟವರು. ಯಕ್ಷಗಾನದ ಮೂಲಪಾಠವನ್ನು ತಂದೆಯವರಿಂದ ಕಲಿತು ನಂತರ ಕುರಿಯ ವಿಠ್ಠಲ ಶಾಸ್ತ್ರಿಗಳು, ಹೊಸ ಹಿತ್ಲು ಮಾಲಿಂಗ ಭಟ್ಟರು ಮೊದಲಾದ ದಿಗ್ಗಜರಿಂದ ಯಕ್ಷಕಲೆಯ ಮತ್ತಷ್ಟುನ್ನು ಕಲಿತರು. ಗೋವಿಂಧ ಭಟ್ಟರು, ನಾರಾಯಣ ಭಟ್ಟರು ಹೀಗೆ ಹಲವು ಹಿರಿಯ ಕಲಾವಿದರ ಗರಡಿಯಲ್ಲಿ ಪಳಗಿ ಯಕ್ಷ ಕಲೆಯನ್ನು ಮೈಗೂಡಿಸಿಕೊಂಡರು ಡಾ. ಶ್ರೀಧರ ಭಂಡಾರಿಗಳು.

ಪ್ರಶಸ್ತಿಗಳು ಮತ್ತು ಸಾಧನೆಗಳು

ನನಗೆ ದೊರೆತ ಪ್ರಶಸ್ತಿಗಳು.

ನ್ಯೂಸ್ ಫೀಡ್ ಮುಂಬರುವ ಕಾರ್ಯಕ್ರಮಗಳು